‘ಗಂಗಾ’ ಶೀಘ್ರದಲ್ಲೇ ತೆರೆಗೆ
Posted date: 24 Tue, Mar 2015 – 12:03:08 PM

೧೯೯೦ ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೆಸರಾಗಿದ್ದವರು ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್. ಈಗ ೧೯ ವರ್ಷಗಳ ನಂತರ ಇವರಿಬ್ಬರೂ ಜೊತೆಯಾಗಿ ಸೇರಿದ್ದಾರೆ. ಇದರ ಫಲವೆಂಬಂತೆ ‘ಗಂಗಾ’ ಸಿನಿಮಾ ಸಂಪೂರ್ಣಗೊಂಡಿದ್ದು ಶೀಘ್ರದಲ್ಲೇ ತೆರೆಗೆ ಬರಲು ತಯಾರಾಗಿದೆ.
ಹೆಸರಾಂತ ನಿರ್ಮಾಪಕ ರಾಮು ನಿರ್ಮಿಸಿರುವ  ‘ಗಂಗಾ’ ಸಿನಿಮಾ ೭.೧ ಡಿಜಿಟಲ್ ಸರೌಂಡ್ ಸೌಂಡ್ ತಂತ್ರಜ್ಞಾನದ ಲೇಪನದೊಂದಿಗೆ ಹಾಜರಾಗಲಿದೆ. ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಸಮ್ಮಿಲನದ ಈ ಚಿತ್ರದಲ್ಲಿ ಸಾಹಸ ಮತ್ತು ಸೆಂಟಿಮೆಂಟ್ ಸೇರಿದಂತೆ ಹಲವು ವಿಶೇಷಗಳನ್ನು ಒಳಗೊಂಡಿದೆ.
ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ, ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ.
ಪೋಷಕ ಪಾತ್ರಗಳಲ್ಲಿ ಶ್ರೀನಿವಾಸಮೂರ್ತಿ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧು ಕೋಕಿಲ, ಎಂ ಎನ್ ಲಕ್ಷ್ಮೀದೇವಿ, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮಾ ಚೌಧರಿ ಹಾಗೂ ಇತರರು ಇದ್ದಾರೆ. ವಿನೋದ್ ಮನೋಹರ್ ಅವರ ಸಂಕಲನ, ಕೆ ಕಲ್ಯಾಣ್ ಅವರ ಸಾಹಿತ್ಯ, ಫಳನಿ ರಾಜ್ ಅವರ ಸಾಹಸ, ಬಾಬು ಖಾನ್ ಅವರ ಕಲಾ ನಿರ್ದೇಶನ ‘ಗಂಗಾ’ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed